ಆರ್ಥಿಕ ಬಿಕ್ಕಟಿನ ಹಿನ್ನೆಲೆಯನ್ನು ಪರಿಶಿಲಿಸಿದೆರೆ ಒಂದು ರೋಪಕಾಲನ್ಕಾರ (Metaphor) ನೆನೆಪಿಗೆ ಬರುತ್ತದೆ . ನೀರಿನಲ್ಲಿ ಒಂದು ಸುಳಿವು ಉದ್ಬವಿಸೋದು ಅದರಿನ ವಳಗೆ ಇರುವ ಪ್ರವಾಹದ ಅಸಮತೊಲೆತೆಇಂದ ಅಂಥ ಹೇಳ ಬಹುದು. ಅದು ಚಿಕ್ಕ ರೂಪದಲ್ಲಿ ಉದ್ಬವಿಸಿದರು, ಹರಿವಿನ ಅಲೆಯ ಶಕ್ತಿ ಅದನ್ನ ಒಂದು ದೊಡ್ಡ ಅಂತರ ಜಲಮುಖಿಯಲ್ಲಿ ಪರಿವರ್ತೇನೆ ಗೋಳ್ಳುತೆದೆ.ಅದರ ಸುಳಿವಲ್ಲಿ ಏನು ಸಿಕ್ಕರೂ ನುಸುಳಿ ಹೋಗುತ್ತದೆ (a big funnel sucking everything in its way ). ಹಾಗೆಯೇ ಆರ್ಥಿಕ ಮಾರುಕಟ್ಟೆ ಯಲ್ಲಿ ಈ ತರದ ಒಂದು ಸಂಕಟ ಉಂಟಾಗಿದೆ. ಈ ಸುಳಿವಿನ ಜನನ, ಆ ಬೆಂಕಿಯ ಕಿಡಿ , ಅಮೇರಿಕಾದ ಗ್ರಹ ಸಾಲದ ಮಾರುಕಟ್ಟೆಯಿಂದ ಉದ್ಭವಿಸಿದೆ . ಅಲ್ಲಿ ಆದದ್ದು ಬಿಡಿಸಿ ಹೇಳೋದು ಅಂದರೆ ಇಷ್ಟೇ, ಜನಗಳಿಗೆ ಸಾಲ ತೀರಿಸುವಷ್ಟು ಅರ್ಹತೆ ಇಲ್ಲದಿದ್ದರೂ ಅಲ್ಲಿನ ಬ್ಯಾಂಕುಗಳು ಆವರೆಗೆ ಸುಲುಭ ಧರದಲ್ಲಿಸಾಲ ನೀಡಿ ಮನೆ ಕೊಳ್ಳುವದಕ್ಕೆಅನುಕೂಲ ಮಾಡಿತು . ಇದಕ್ಕೆ ನಾಂದಿ ಹೂಡಿದ್ದು ಆಲ್ಲನ ಗ್ರೀನ್ಸ್ಪಾನ್ ಅವರು ಫೆಡೆರಲ್ ಬ್ಯಾಂಕಿನ ಚೇರ್ಮನ್ ಅವಧಿಯಲ್ಲಿ ಬ್ಯಾಂಕ್ ಬಡ್ಡಿದರ ೧-೨ % ಅಷ್ಟು ಕೆಳ ಮಟ್ಟಗಿಳಿದಿದ್ದು , ಇದರಿಂದ ದುಡ್ಡು ಹಾದಿಯಲ್ಲಿ ಬಿದ್ದಷ್ಟು ಸುಲಭವಾಗಿತ್ತು. ಬ್ಯಾಂಕುಗಳು ಕೂಡ ತಮ್ಮ ಸಾಲ ನೀಡುವ ನಿಯಮಗಳಲ್ಲಿ ಸಡಲತೆ ತಂದು, ಅಸ್ವಾಭಾವಿಕ ತಗಾದೆ ಮಾಡುವಂಥಾಯೀತು. ಈದರಿಂದ ರಿಯಲ್ ಎಸ್ಟೇಟ್ ನೀರಗುಳ್ಳೆ ( real estate bubble ) ಶೃಷ್ಟಿ ಆಯೀತು. ಫ್ರೀ ಮಾರ್ಕೆಟ್ ನೆಪದಲ್ಲಿ ಅಮೇರಿಕಾ ಸರಕಾರ ಕ್ರಮಪಡಿಸುವರು (regulators) ಮುಖ ಮೊರೆ ಮಾಡಿಕೊಂಡರು . ಆರ್ಥಿಕ ಮತ್ತು ಕ್ರಮ/ಕಾಯಿದೆ ಸಡಲತೆಯಿಂದ ಗಂಡಾಂತರ (ರಿಸ್ಕ್) ಕಟ್ಟು ಪಾಡಾಯೀತು. ಸಾಲದ ಈ ಮೂಟೆ (Asset Blocks)ನಾನಾರೀತಿಯಲ್ಲಿ ಪರಿವರ್ತಿಸಿ ಅಪ್ರಧಾನ (secondary)ಮಾರುಕಟ್ಟೆಯಲ್ಲಿ ಮಾರಲಾಯಿತು.ಉಧಾರಣೆಗೆ ಸೀ.ಡೀ.ಓ
(Collateralized Debt Obligations) ಎಂಬುವ ವಂದು ತಯ್ಯರಿಕೆ. ಅದರಲ್ಲಿ ಇರುವ ಗಂಡಾಂತರ (ರಿಸ್ಕ್)ಕೂಡ ಸಮಾನವಾಗಿ ಹಂಚಲಾಯೀತು. ಹೀಗಾಗಿ ವ್ಯವಸ್ಥಾನುಸಾರವಾದ (Systemic) ಭಂಗ (Failure)ನಿಟ್ಟಿನಲ್ಲಿ ನಾಂದಿ ಹೂಡುವಲ್ಲಿ ಅಮೆರಿಕನ್ ಸಿಸ್ಟಂ ಪ್ರಮುಖ ಪಾತ್ರಹೊಂದು ಜಾಗತಿಕ ಬಿಕ್ಕಟಿನ ಸೂತ್ರ ದಾರೆ ಎಂದು ಕೆಟ್ಟ ಹೆಸರು ಪಡದಿದೆ.
ಬೇಲಿ ಹಣ ಹೂಡಿಕೆ (Hedge Funds ) ಮತ್ತು ಆಸ್ತಿ ಹೂಡಿಕೆ (Investment) ಬ್ಯಾಂಕುಗಳು ಈ ಸುಳಿವಿನ ಮೊದಲ ಆಹುತಿಯಾದವು . ಲೆಹ್ಮನ್ನ್ ಬ್ರದರ್ಸ್ಅಂಥ ವಿಶ್ವಮಟ್ಟ ಖ್ಯಾತಿಯ ಸಂಸ್ಥೆ ಕುಸಿದ ಮೇಲೆ ಹಣವ್ಯವೆಸ್ಥೆ ಪ್ರಪಂಚ ನಡಗುವಂತಾಯೀತು. ಈದಾದನಂತರ ಫ್ರೆಡ್ಡಿ ಮ್ಯಾಕ್ ಮತ್ತು ಫನ್ನಿಎ ಮ್ಯಾಕ್ , ಗೃಹ ಸಾಲ ಕ್ರಮಪಡಿಸುವ ಸರಕಾರಿ ಸ್ವಾಯಮ್ವದ ಅತ್ತಿ ದೊಡ್ಡ ಹಣಕಾಸಿನ ಸಂಸ್ಥೆಗಳು ಗುರಿಯಾದವು. ಅಮೇರಿಕಾದ ಸಂಯುಕ್ತ ಬ್ಯಾಂಕ್ (US Federal Bank) ಮತ್ತು ಸರ್ಕಾರ ಇವನ್ನು ಉಳಿಸಲು ನಿಟ್ಟಿನಲ್ಲಿ ಮುಂದೆ ಆದಾಗ ಒಂದು ಚಕ್ರವ್ಯೂಹದಲ್ಲಿ ಸಿಲುಗಿ ಕೊಂಡವು. ಏಳು ಶತ ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಹೂಡಿದರು ಈ ಬಿಕ್ಕಟಿನ ಪರಿಹಾರ ಇನ್ನು ಸಿಕ್ಕಿಲ್ಲ. ಸಿಟಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ ದಂತಹ ವಿಶ್ವದ ಅತ್ತಿ ದೊಡ್ಡ ಬ್ಯಾಂಕಗಳು ಕೂಡ ಸಂಕಟದ ಪರಿಸ್ಥಿತಿಯಲ್ಲಿ ಇವೆ . ಗಾಯದ ಮೊತ್ತ ಗಂಬೀರ ಇರುವದರಿಂದ ರಕ್ತತೆಗೆ ಇನ್ನು ನಿಂತಿಲ್ಲ , ತಗ್ನ್ಯರ ಓಹೆ ಮಟ್ಟಿಗೆ ಇನ್ನು ಹಲುವು ಶತ ದಶಕೋಟಿ ಡಾಲರ್ ಅಷ್ಟು ನಷ್ಟ ಉಂಟಾಗಲಿದೆ . ಸರ್ಕಾರದ ನೆರವು ಇಲ್ಲದಿದಲ್ಲಿ ಇವುಗಳ ಬಂಡವಾಳ (Capital = Assets – Liabilities) ನಷ್ಟದಲ್ಲಿ ಅಳಿಸಿ ಈಗಾಗಲೇ ಕುಸಿದಿರುತಿತ್ತು.
ಈ ಬೆಳವಣಿಗೆಇಂದ ವಿಶ್ವ ಅರ್ಥ ವ್ಯವೆಸ್ಥೆ ಮೇಲೆ ಎಷ್ಟು ಪರಿಣಾಮ ಬೀಳಬಹುದೆಂದು ಮುಂದಿನ ದಿನಗಳಲ್ಲಿ ನೋಡ ಬೇಕಾಗಿದೆ . ಈ ಪ್ರಯಾಸದಲ್ಲಿ ಅಮೇರಿಕಾ ಸರ್ಕಾರದ ನೆರವು ಸಾಲಲಿಲ್ಲದಿದ್ದರೆ ಘೋರ ಪರಿಸ್ಥಿತಿ ಉಂಟಾಗಬಹುದು, ಭಾರಿಯಾದ ತಗ್ಗು (great depression)ಅಂಥಹ ಇನ್ನೊಂದು ವಿಶ್ವ ಸಂಕಟ ಹಾದಿ ತಿರುವಿನಲ್ಲಿ ಕಾದುಕುಳಿತಿರ ಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ