ಮಂಗಳವಾರ, ಅಕ್ಟೋಬರ್ 13, 2009

ಟ್ರೆಕ್ಕಿಂಗ್ - ಒಂದು ಅನುಭವ

ಕೆಲವು ವರುಷಗಳ ಹಿಂದೆ ಒಂದು ಟ್ರೆಕ್ಕಿಂಗ್ ಸಂದರ್ಭದಲ್ಲಿ ಆದ ಅನುಭವಗಳನ್ನೂ ವ್ಯಕ್ಯಾಂಗ ದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ


ಕವಿದ ರಾತ್ರಿಯ ಚಿಟ್ಟೆಗಳ ಮೆಲ್ವಾದ್ಯ ಮುಗಿಯಲು,
ವಿಸ್ತಾರ ನೀಲ ಹಸಿರು ಚುಂಬುತ,
ಕಣ್ಣು ತೆರೆಯುವ ಅಹ್ವಾನ ನೀಡಿತು.
ಬೀಡು ಕಟ್ಟಿದ ತಂಬು
ನಿಸರ್ಗದ ಮಂಜಿನ ಮಡಿಲಲ್ಲಿ ಕರಗಿ ಹೋಗಿರಲು,
ಗಗನದಲಿ ತೆಲಾಡುತಿದ್ದ ಹದ್ದು
ಗಾಳಿಯ ಮೆಲ್ತೆರೆಯ ಹಿಡಿತದಲಿ ತುಗಾಡುತ್ತಾ,
ಮೊದಲ ದಿನದ ಅರಣ್ಯ ದಂಡಯಾತ್ರೆಗೆ
ಅಮಂತ್ರಿಸಿತು.

ದೂರದ ಬೆಟ್ಟ ಬೆಳಗಿನ ಸೊಬಗಿನಲಿ,
ಮಂಜಿನ ಹೂಮಾಲೆ ತೊಟ್ಟಂತೆ ಕಂಡುಬರಲು
ಥಳ ಥಳಿಸುವ ಚಪ್ಪರ ಹಾಕುತ ಅಲ್ಲಿಗೆ,
ಬೆಳಗಾಗಿದ ಸೂರ್ಯನ ಕಿಡಿ ಕಾರುತ್ತ,
ನೂರಾರು ಇಬ್ಬನಿಗಳು ಕಣ್ಣು ಸೆಳೆದವು.
ಗಗನ ಏರುವ ಛಲ ತೊಟ್ಟ ಸೂರ್ಯ, ಅವನ ಜೊತೆ
ಸೆರೆಸಾಡುತ್ತ ಪಯಣ ಮುಂದುವರೆಯಿತು.


ಮಧ್ಯಾನದ ವೈಭವ ಅರಿಯಲು,
ಕಾಲು ಉದ್ದಕ್ಕೂ ಬೆಳೆದಿರುವ ಕೆಂದ ಹುಲ್ಲು
ಗಾಳಿಯ ಮೆಲ್ಚ್ಹಾವಣಿಯಲ್ಲಿ ರಾಗ ಬೆಸೆದವು
ಕ್ಷಿತಿಜದಲ್ಲಿ ರವಿ ಅರ್ಧಾವ್ರತ್ತ ಪಯಣ
ಮುಗಿಸುವಲ್ಲಿ ದಿನ ಇಂಗಿ ಹೋಯಿತು.

ನದಿ ದಂಡೆ ಮೇಲಿರುವ ದೋಣಿ
ಬಾಡುವ ಬೆಳಕಿನ ತನ್ನ ಪ್ರತಿಬಿಂಭದ ಮೆಲೆ
ಎಲ್ಲೊ ಕಳಿದು ಹೊಗಿರೊ ಹಾಗೆ ಕಂಡು ಬಂತು.



ಆಗಸ ಬೂದಿಬಣ್ಣದ ಹೊದಿಕೆ ಹೊಚ್ಚಲು,
ಮತ್ತೊಂದು ನಿಸರ್ಗ ಸಂಜೆಯ ಇಂಪು ಏರಿತು.
ಕರಕಶ ಧ್ವನಿ ಹಾಡುತ್ತಾ
ಒಲೆಯಲಿ ಸುಡುವ ದಿಮ್ಮಿ ,
ನಿಸರ್ಗದ ಗೊಇಂಗೂಡಿನಲ್ಲಿ ಬೇರೆಯಿತು.

5 ಕಾಮೆಂಟ್‌ಗಳು:

Unknown ಹೇಳಿದರು...

Buddy u need tohave it in english so that we can read and assimilate the thoughts soon enough but if it takes a herculean effort to understand what is written it becomes difficult to find reserves of patience to go thru the ordeal of perusing the facts..

Unknown ಹೇಳಿದರು...

hey bro u knw my kannada its as abd as ur konkani..... if in eng my group of friend would hv enjoyed it 2

Vasant Prabhu ಹೇಳಿದರು...

Amar - good to hear you...I guess my K diction and comprehension is above average, you might recall I was the best in business during entire School days...it has only improved over time, thanks to blogging Business. The flip side is, this may be helping you rebrush your K too:)

Reks - I agree with your first part, I am not sure English can bring out the poet(?) in me...

Anuj Valmiki ಹೇಳಿದರು...

ಚನ್ನಾಗಿದೆ!
ತಂಬು - ಇದರ ಅರ್ಥ? ಮೈಚಳಿ ಎಂದಲೇ?
ಕರಕಶ - ದಿಮ್ಮಿಯ ಚಟಪಟ ಕರ್ಕಶವೇ? ಇರಲಾರದು!
ಗೊಇಂಗೂಡಿನಲ್ಲಿ - ಇದರ ಅರ್ಥ? ಗುಙ್ಗುಡುವ ಸಿಕಾಡ-ಚಿಟ್ಟೆಯು ಕೂಗೇ?

Vasant Prabhu ಹೇಳಿದರು...

Thanks Anuj for dropping by ...
ತಂಬು - ಅರ್ಥ Tent,
ಕರಕಶ: ದಿಮ್ಮಿಯ ಚಟಪಟ ಕರ್ಕಶವೇ? - ಹೌದು.. .dry twigs breaking up in smoldering fire
ಗೊಇಂಗೂಡಿನಲ್ಲಿ - din (of the forest life)